ಗುರುವಾರ, ಮೇ 19, 2011


"ತೀರ’ದ ಅಲೆ ಅಲೆಯಲಿ....



ಮೌನ ತಳೆದ ಸಾಗರದಲ್ಲಿ
ಬೀಸಿತೊ೦ದು ಬಿರುಗಾಳಿ
ಆಡುತ್ತಿದ್ದ ಜೀವದಲ್ಲಿ
ಅಳಲಾಯ್ತು ತ೦ಗಾಳಿ!

ಕಡಲ ಕದಡಿದ ನೋವಿನಾ ಅಲೆಗಳು
ನೆನಪಿನ ತೀರದಿ ಮರೆಯಾಯ್ತು ಸಿಹಿ ದಿನಗಳು!
ಉಕ್ಕುತಿರುವ,ಕೆರಳುತಿರುವ ಭಯದ ಭವವು
ನರಳುತಿರುವ,ಸೋಲುತಿರುವ ಹೃದಯ ಜೀವವು!
ಬದುಕಲೇಕೆ ಈ ಆಕ್ರ೦ದನ?
ಬದುಕಬೇಕೆ ಮುಗ್ಧ ಹೂಮನ!?
ಭೋರ್ಗರೆದು ಅಪ್ಪಳಿಸುವ ತೆರೆಗಳು
ಛಿದ್ರವಾಗಿದೆ ಸುಮನಸದ ಎಸಳು!

ಮಳಲ ಮೇಲೆ ಬರೆದ ಹೆಸರು
ಅಳಿದುಹೋಯ್ತೇ ಗುರಿಯ ಸೂರು?!
ಕ್ಷಣಗಳಲಿ ತೊರೆದುಹೋಯ್ತೇ
ಯುಗ ಯುಗಗಳ ಶ್ರಮದ ಉಸಿರು!?..

ವಿಲವಿಲನೆ ಒದ್ದಾಡಿ
ಕರುಳು ಕಿವುಚುವ ಹಾಗೆ!
ಸಾಯುತ್ತಿದ್ದರೂ ಮೇಲಕ್ಕೆ ಪುಟಿದು
ಭರವಸೆಯಾದ ಜೀವಕ್ಕೆಷ್ಟು ಛಲವು?!
ಒಡೆದುಹೋದ ಬ೦ಡೆಯಿನ್ನು
ಮತ್ತೆ ಬದುಕ ನಡೆಸದೇನು?
ಹಾರಿಹೋಗೋ ಜೀವದಲ್ಲಿ
ದಾರಿ ತೋರೋ ದೀಪ ನೀನು!!

ಅಡಗಿಹೋಗಲಿ ಅಲೆಯ ತಾ೦ಡವ
ನಾದವಾಗಲಿ ತೆರೆಯ ಭಾವ
ತೀರದಲ್ಲಿ ಪ್ರೀತಿ ಅರಳಲಿ
ನಗುತಲಿರಲಿ ಮನದಿ ಕಲರವ!!.............



                                       ~‘ಶ್ರೀ’
                                         ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ