ಬುಧವಾರ, ಏಪ್ರಿಲ್ 6, 2011


ಭರವಸೆಯ ಬೆಳಕಿನತ್ತ...

ಮನಸೇಕೋ ಮಾತಾಡಿದೆ
ಕನಸೇಕೋ ಕುಣಿದಾಡಿದೆ
ತನುವೆ೦ಬ ಬನದಲ್ಲಿ;
ಜನುಮದಾ ಬಾನಲ್ಲಿ!

ನೆನಪೇಕೋ ಮರುಕಳಿಸಿದೆ
ಹನಿಯಾಗಿ ತಾನಿಳಿದಿದೆ
ಮನಸಿನಾ ಆಳದಲಿ;
ಕನಸಿನಾ ಗೂಡಿನಲಿ!

ಯತ್ನದಲೂ ಸೋಲಾಗಿದೆ
ನಿತ್ಯದಲೂ ಬೋರಾಗಿದೆ!
ಹಿತವಾಗಿ ಕಾದಿಹುದು
ಬತ್ತದಿಹ ಗೆಲುವದು!

ಸೋಲೆ೦ದೂ ಕೊನೆಯಲ್ಲ
ಗೆಲುವೊ೦ದೇ ನಿನಗೆಲ್ಲಾ!;
ಬಾಳೆ೦ಬ ಪಯಣದಲಿ
ಒಲವನಾ ಹಾದಿಯಲಿ

ಮನಸುಗಳು ಇರುವಲ್ಲಿ
ಕಲ್ಪನೆಗೆ ಬರವೆಲ್ಲಿ?
ಕಾಣದಿಹ ಚೇತನದಿ
ಅಲೆಗಳಾ ಜೀವನದಿ!..

ಭರವಸೆಯ ಬೆಳಕಿನಲಿ
ಹಾರುತಿಹ ದು೦ಬಿಗಳಲಿ
‘ವರ ಭ್ರಮರ’ವು ನೀನಾಗಲಿ;
ಅರಳುತಿಹ ಬದುಕಲ್ಲಿ!!....

                  ~‘ಶ್ರೀ’
                    ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ