"ಬೆಸುಗೆ...ಹೀಗೇ..."
ಹನಿಯೇ ಮಳೆಹನಿಯೇ
ಇಳೆಗೆ ಬಳುವಳಿಯೇ!
ಒಡಲ ಕಡಲನ್ನು
ನೀ ಸೇರೋ ಚಳುವಳಿಯೇ!
ಮುತ್ತು ಬಿದ್ದ ಹಾಗೆ
ಸುತ್ತ ಸಿಡಿವ ಮಾಯೆ
ಉತ್ತು ಬೆಳೆವ ಕೈಗೆ
ಮತ್ತೆ ಉಸಿರು ತಾಯೆ!
ನಿನ್ನ ಸ್ಪರ್ಶ ಲೀಲೆ
ಮಿ೦ಚು ಮುಡಿದ ಬಾಲೆ
ನಾಚಿ ನಗುವ ವೇಳೆ
ಒಲಿಸು ಹೃದಯದಲ್ಲೇ
ಹುಚ್ಚು ವಿರಹ ನಾಳೆ
ನುಚ್ಚು ನೂರು ಬಾಳೆ!
ಅರಳು ಮುದುಡಿ ಬಿಡದೆ
ಸ್ವಚ್ಛ ಗೆಲುವು ನಿನದೆ!
ತಬ್ಬಿ ಒಲಿದ ಜೀವ
ಮಬ್ಬು ಕಳೆವ ಭಾವ
ಬಾನೆ ಮಡಿಲು ಕೊನೆಗೆ
ಬಾಳ ಪಯಣ ಹೀಗೆ!!
~‘ಶ್ರೀ’
ತಲಗೇರಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ