"ಮೊರೆತ..."
ಕನಸುಗಾಡಿನ ಬಿಸಿಲ ನಡಿಗೆ
ಅಂತರದ ಸನಿಹಕ್ಕೆ ಅರ್ಥವಾಗದ ಬೆವರು..
ಮುರಿದು ಬಿದ್ದಿಹ ಬಿದಿರ ಕೋಲಿಗೆ
ರಂಧ್ರಗಳ ಜೊತೆ ಸಿಗಲು,ಸ್ವರಗಳಾ ತಳಿರು..
ಖಾಲಿಹಾಳೆಯ ನಾಳೆಯೊಳಗೂ
ಖಾಲಿಯಾಗದ ಕಡಲ ಮೊರೆತ...
ಬಿಗಿದ ಬಿಲ್ಲಿನ ದಾರಕೇನೋ ಬಯಕೆ
ತಲುಪಿದ್ದು ಕೊನೆಗೆ ಬೆರಳಚ್ಚಿನಾ ಬಾಣ..
ಚಿಗುರು ಹುಲ್ಲಿನ ಉಗುರ ತುದಿಗೆ
ಹಚ್ಚೆ ಹಾಕುವ ಕೆಲಸ ಹುಡುಕುವಾ ಕಿರಣ..
ಖಾಲಿಹಾಳೆಯ ನಾಳೆಯೊಳಗೂ
ಖಾಲಿಯಾಗದ ಕಡಲ ಮೊರೆತ...
ಎದೆಯ ಪನ್ನೀರು ತೊರೆಯಾಗಿ ಹರಿದಾಗ
ಹುಟ್ಟಿದ್ದು ಮಾತ್ರ ಅಂಬರದ ಅಲೆಗಳು..
ಕೂಡುವಾ ಆವೇಗ ಕವಲಾಗಿ ಬಿರಿದಾಗ
ಬದಲಾಗೋ ಪಾತ್ರಕ್ಕೆ ನೂರಾರು ಮುಖಗಳು..
ಖಾಲಿಹಾಳೆಯ ನಾಳೆಯೊಳಗೂ
ಖಾಲಿಯಾಗದ ಕಡಲ ಮೊರೆತ...
~‘ಶ್ರೀ’
ತಲಗೇರಿ
ಕನಸುಗಾಡಿನ ಬಿಸಿಲ ನಡಿಗೆ
ಅಂತರದ ಸನಿಹಕ್ಕೆ ಅರ್ಥವಾಗದ ಬೆವರು..
ಮುರಿದು ಬಿದ್ದಿಹ ಬಿದಿರ ಕೋಲಿಗೆ
ರಂಧ್ರಗಳ ಜೊತೆ ಸಿಗಲು,ಸ್ವರಗಳಾ ತಳಿರು..
ಖಾಲಿಹಾಳೆಯ ನಾಳೆಯೊಳಗೂ
ಖಾಲಿಯಾಗದ ಕಡಲ ಮೊರೆತ...
ಬಿಗಿದ ಬಿಲ್ಲಿನ ದಾರಕೇನೋ ಬಯಕೆ
ತಲುಪಿದ್ದು ಕೊನೆಗೆ ಬೆರಳಚ್ಚಿನಾ ಬಾಣ..
ಚಿಗುರು ಹುಲ್ಲಿನ ಉಗುರ ತುದಿಗೆ
ಹಚ್ಚೆ ಹಾಕುವ ಕೆಲಸ ಹುಡುಕುವಾ ಕಿರಣ..
ಖಾಲಿಹಾಳೆಯ ನಾಳೆಯೊಳಗೂ
ಖಾಲಿಯಾಗದ ಕಡಲ ಮೊರೆತ...
ಎದೆಯ ಪನ್ನೀರು ತೊರೆಯಾಗಿ ಹರಿದಾಗ
ಹುಟ್ಟಿದ್ದು ಮಾತ್ರ ಅಂಬರದ ಅಲೆಗಳು..
ಕೂಡುವಾ ಆವೇಗ ಕವಲಾಗಿ ಬಿರಿದಾಗ
ಬದಲಾಗೋ ಪಾತ್ರಕ್ಕೆ ನೂರಾರು ಮುಖಗಳು..
ಖಾಲಿಹಾಳೆಯ ನಾಳೆಯೊಳಗೂ
ಖಾಲಿಯಾಗದ ಕಡಲ ಮೊರೆತ...
~‘ಶ್ರೀ’
ತಲಗೇರಿ
ಚಿಗುರು ಹುಲ್ಲಿನ ಉಗುರು ತುದಿಗೆ...ಸಾಲುಗಳು ಸೂಪರ್. ಬದಲಾಗೋ ಪಾತ್ರಕ್ಕೆ ನೂರಾರು ಮುಖಗಳು... ಎಂಬ ಸಾಲು ಮನುಷ್ಯ ಕ್ಷಣ ಕ್ಷಣಕ್ಕೂ ಬದಲಾಗುತ್ತಾನೆ ಎಂಬುದನ್ನು ಮನೋಜ್ಞವಾಗಿ ಸೂಚಿಸುತ್ತದೆ. ಕವನ ಬಹಳ ಚೆನ್ನಾಗಿದೆ.
ಪ್ರತ್ಯುತ್ತರಅಳಿಸಿnija ranjana.. badalaagO paatrakke nooraaru mukhagaLu.. :) :) :) sannivEshhakke takkante baNNa gOcharisuttade :) dhanyavaada tamma pratikriyege :)
ಪ್ರತ್ಯುತ್ತರಅಳಿಸಿ