ಭಾನುವಾರ, ಮೇ 19, 2013


"ಕೊನೆಯ ಸಹಿ"...

ನನ್ನೆದೆಯ ಒಲವು ಆ ದಿವ್ಯ ಕಡಲು
ನಿನಗೆಂದೇ ಮೀಸಲು ಬಾ ಚಂದ್ರಿಕೆ
ನನ್ನೆದೆಯ ಪ್ರತಿಶಬ್ದ ನಿನ್ನ ಹೆಜ್ಜೆ ಕಾಗುಣಿತ
ನೀನೊಂದೇ ಕೊಳಲು ಈ ಬಡಜೀವಕೆ...

ಸಾಯುವುದು ಸಾವು ನಿನ್ನ ಕೈಯ
ಕೋಮಲತೆ ನನ್ನ ತುಸು ಸೋಕಲು
ತಣಿಯುವುದು ಕಾವು,ನಿನ್ನ ನೆರಳು
ನೆರಳಾಗಿ ನನ್ನಲ್ಲೇ ತಾ ಹಬ್ಬಿರಲು..
ಜೀಕು ಜೀಕು ಹೂವೆಸಳ ತೊಟ್ಟಿಲು
ಮತ್ತೆ ಬೇಕು ಎದೆಗರ್ಭದಾ ಲಾಲಿಸಾಲು..

ನೀನೊಂದು ಮೃದು ಮಳೆಸೊಲ್ಲು
ಮುದ್ದಾದ ಸ್ವಪ್ನಗಳ ಹೊಂಬಿಸಿಲು..
ನನದೆಲ್ಲ ನಾಳೆಗಳ ನೂರು ಬೆಳಕು
ನನ್ನ ಕೊರಳ ಅಲೆಅಲೆಯ ನೇಹ ಪಲುಕು
ಜೀಕು ಜೀಕು ಹೂವೆಸಳ ತೊಟ್ಟಿಲು
ಮತ್ತೆ ಬೇಕು ಎದೆಗರ್ಭದಾ ಲಾಲಿಸಾಲು...

ಆ ಚಂದ್ರ ಸರಿದಾನು
ತಾರೆಗಳ ಜೊತೆಯಲ್ಲಿ ಪರದೆಯೊಳಗೆ
ನನ್ನೆದೆಯ ಬಾಂದಳದ
ತಂಬೆಳಗು ತುಂಬಿರಲು ನಿನ್ನ ನಗೆಯೊಳಗೆ
ಜೋಪಾನ ಮಾಡುವೆನು ನಿನ್ನ ಗೆಳತಿಯೇ
ನನ್ನುಸಿರ ಕೊನೆಸದ್ದ ಸಹಿಯೆಂದೂ ನಿನಗಿರಲು...

                                         ~‘ಶ್ರೀ’
                                           ತಲಗೇರಿ

1 ಕಾಮೆಂಟ್‌:

  1. "ಜೀಕು ಜೀಕು ಹೂವೆಸಳ ತೊಟ್ಟಿಲು"
    "ನೀನೊಂದು ಮೃದು ಮಳೆಸೊಲ್ಲು"
    " ನನ್ನುಸಿರ ಕೊನೆಸದ್ದ ಸಹಿಯೆಂದೂ ನಿನಗಿರಲು..."
    ವಾರೇವ್ಹಾ ಕವಿ ಮಹಾಶಯ, ಇಷ್ಟೆಲ್ಲ ಒಲುಮೆ ಇಂದ ಕರೆದರೆ 'ಓ' ಗೊಡದಿರುವಳೇ ಆಕೆಯೂ...

    ಪ್ರತ್ಯುತ್ತರಅಳಿಸಿ