"ಕನವರಿಕೆ ಕೊನೆಯಲ್ಲಿ"...
ಅಲೆ ಅಲೆಯಾಗಿ ಸೇರು ಬಾ ಚಂದ್ರಮ
ಮರೆಯಲ್ಲಿ ಅವಿತ ಅಭಿಸಾರಿಕೆಯ
ಹಸಿ ಮಳೆಯಾಗಿ ಇಳಿದು ಬಾ ಸಂಭ್ರಮ
ಎದೆಯಲ್ಲಿ ಬೆರೆಯೆ ಮೃದು ಪರಿಣಯ
ನೆರಳಲ್ಲಿ ಸೆರೆಯಾಗಿ ಮೌನ ಸಂವಾದ
ಕೊರಳಲ್ಲಿ ಕಂಪನದ ಚೆಂದ ಜಾದೂ..
ಬೆರಳಲ್ಲಿ ಬಲೆಯಾಗಿ ಕವಲ ಬಂಧ
ಮೂಡಿಹುದು ಆನಂದದ ಬಿಂದುವೊಂದು..
ನಾಚಿಕೆಯ ನೆಪದಲ್ಲಿ ಒನಪು ಅವಳಿಂದ
ಕನವರಿಕೆ ಕೊನೆಯಲ್ಲಿ ಸಣ್ಣ ಉಸಿರು..
ಯೌವನದ ಹೊಸ್ತಿಲಲಿ ಮನಸು ಮಕರಂದ
ಬಿಸಿಯಿರುವ ಎದೆಯಲ್ಲೂ ಹಚ್ಚ ತಳಿರು..
ಬಚ್ಚಿಡುವ ಬಯಕೆಗಳ ಎಣಿಕೆ ಒಳಗಿಂದ
ಹುಸಿ ಮುನಿಸ ಬಗಲಲ್ಲಿ ಮೆಲ್ಲ ಬೆವರು
ಕಟ್ಟಿರುವ ಗೆಜ್ಜೆಯಲೂ ಮಿಡಿತ ನಿನಗಂತ
ತುಸು ಕನಸ ಸೆರಗಲ್ಲಿ ಹಾಗೇ ಸವರು..
ಬರೆದಿಡುವೆ ನಿಮಿಷಗಳ ಮೀಸಲು ಪುಟದಲ್ಲಿ
ಎನುತಿಹಳೇ ಅವಳಿಲ್ಲಿ ನೆನೆದು ಚಂದ್ರಮನ
ಬಿಡಬಾರದೇ ಬಿಡಾರವನು ಅವಳೆಡೆ ಯಾನದಲ್ಲಿ
ಬೆರೆಯುತ್ತ ಒಲವಲ್ಲಿ ಕರಗಿ ಈ ಕ್ಷಣ..
~‘ಶ್ರೀ’
ತಲಗೇರಿ
" ಬೆರೆಯುತ್ತ ಒಲವಲ್ಲಿ ಕರಗಿ ಈ ಕ್ಷಣ.." ವಾರೇವ್ಹಾ...
ಪ್ರತ್ಯುತ್ತರಅಳಿಸಿhttp://badari-poems.blogspot.in/