ಶುಕ್ರವಾರ, ಜುಲೈ 5, 2013

"ಗಗನ"....

          "ಗಗನ"....
ಮೋಡದ ಮನೆಯ ಚೆಂದದ ಮಹಲು
ಕಾಡುವ ಹನಿಗಳ ಸಾಲಿನ ಬಯಲು..
ಸುಳಿಮಿಂಚಿನ ಮೆರಗಂಚಿನ ಬಯಕೆ..
ಸತ್ಯ ಮಿಥ್ಯಗಳ ನಿತ್ಯ ಬೆತ್ತಲೆ ಭೂಮಿಕೆ..

ಕರಿಬಿಳಿ ಕನಸ ಮಿಲನದ ಜಾಗ
ಹಸಿಬಿಸಿ ಮನಸ ಪ್ರಣಯದ ಸೋಜಿಗ
ತಿಳಿಯದ ಅಗಲ,ಮುಗಿಯದ ಹಾದಿಯ ಬಂಧ
ಹೊಸ ಹೊಸ ಬೆಸುಗೆಗೂ ಸೋಕುವ ಸೃಷ್ಟಿಯ ಗಂಧ..

ಸಾವಿರ ಹೊಳಪಿನ ಸುಂದರ ಪರ್ವ
ಈ ಜಗಜೀವಕೆ ತುಸುಬೆಚ್ಚನೆ ಗರ್ವ
ಅರಳುವ ಮೇಘ,ಕರಗುವ ಭಾವದ ಸಮರ
ಕೊನೆಯಲಿ ಮತ್ತದೇ ಕಣ್ಣೀರಿನ ಹಸಿ ಪ್ರವರ..

ಆಸೆಗಳು ಒಂದೊಂದೇ
ತಾ ಮುಂದೆ ಎನುತಿರಲು
ಹಚ್ಚಿರುವೆ ಅವಕೂ ಸಾಲಿನಾ ಗೀಳು
ಉಸಿರಿಗೆಲ್ಲ ತುಸು ತುಡಿತವಿಟ್ಟು
ಎದೆಯ ತೆರೆದಿಹೆ ಗಗನ..
ಕಲೆಗಾರ ಸೋಕಿಸಿಹ ಅಲ್ಲೂ
ತನ್ನದೇ ಕುಂಚವನ್ನ,ಎದೆಯಂಚ ಪ್ರೀತಿಯನ್ನ..


                                    ~‘ಶ್ರೀ’
                                      ತಲಗೇರಿ

1 ಕಾಮೆಂಟ್‌:

  1. "ಸಾವಿರ ಹೊಳಪಿನ ಸುಂದರ ಪರ್ವ" - ಇದು ಅವರ ಕವನವಾದ ಶಾಲೂ ಹೌದು ಜೊತೆಗೆ ಅವರ ಕವನಗಳ ಹೂರಣವೂ ಹೌದು. ಒಳ್ಳೆಯ ಕವಿಯ ಒಳ್ಳೆಯ ಕವಿತೆಗಳು ಅವರ ಬ್ಲಾಗಿನ ತುಂಬಾ

    ಪ್ರತ್ಯುತ್ತರಅಳಿಸಿ