"ಭಿತ್ತಿ ಮೀರಿ"....
ಇಟ್ಟಿಗೆಯ ಪೇರಿಸಿಡಲು
ಭಿನ್ನವಾಗುವ ಹಂಬಲಕೆ
ಮೊದಲ ಮಜಲು...
ಎಲ್ಲ ದಿಕ್ಕಲೂ
ಕಲ್ಲ ಸಾಲಿಗೆ
ತಳವ ಕೊಡಲು
ಮನೆಯ ಮಧ್ಯವೇ
ಹುಟ್ಟುತಿಹವು
ಮತ್ತೆ ಗೋಡೆಗಳು...
ಕತ್ತಲೆಯ ಸಂಗ್ರಹಕೆ
ಬೆಳಕು ದಾಟದ ಹೊದಿಕೆ...
ತಪ್ತ ಬಯಕೆಯ ಝಳಕೆ
ಸಂದು ಸಂದಿಗೂ
ಬಿಸಿಯು ಸೋಕಲು
ಸದ್ದು ಮಾಡೀತೇ ಇನ್ನು
ಸ್ತಬ್ಧ ಕುರ್ಚಿಯಾ ಕೀಲು...
ಮುಗಿಲೆದೆಯ ಬಿಗಿಯು
ನೆರಿಗೆಯನು ಕರಗಿಸಲು..
ತೆರೆ ಕದವ,ಮಳೆ ಹನಿಯ
ಬೊಗಸೆಯಲಿ ಹಿಡಿದುಕೊಳಲು..
ಗರಿಗೆದರಿ ಹಬ್ಬಿಕೊಳಲಿ ಹಕ್ಕಿ
ಇಣುಕಿರಲು ಎಳೆಬಿಸಿಲು...
ತುಂಬಿಕೊಳಲಿ ಗೋಡೆಗಳ ಮೀರಿ
ರಂಗು ರಂಗಿನ ಬೆಳಕಿನೆಸಳು...
~`ಶ್ರೀ'
ತಲಗೇರಿ
ಇಟ್ಟಿಗೆಯ ಪೇರಿಸಿಡಲು
ಭಿನ್ನವಾಗುವ ಹಂಬಲಕೆ
ಮೊದಲ ಮಜಲು...
ಎಲ್ಲ ದಿಕ್ಕಲೂ
ಕಲ್ಲ ಸಾಲಿಗೆ
ತಳವ ಕೊಡಲು
ಮನೆಯ ಮಧ್ಯವೇ
ಹುಟ್ಟುತಿಹವು
ಮತ್ತೆ ಗೋಡೆಗಳು...
ಕತ್ತಲೆಯ ಸಂಗ್ರಹಕೆ
ಬೆಳಕು ದಾಟದ ಹೊದಿಕೆ...
ತಪ್ತ ಬಯಕೆಯ ಝಳಕೆ
ಸಂದು ಸಂದಿಗೂ
ಬಿಸಿಯು ಸೋಕಲು
ಸದ್ದು ಮಾಡೀತೇ ಇನ್ನು
ಸ್ತಬ್ಧ ಕುರ್ಚಿಯಾ ಕೀಲು...
ಮುಗಿಲೆದೆಯ ಬಿಗಿಯು
ನೆರಿಗೆಯನು ಕರಗಿಸಲು..
ತೆರೆ ಕದವ,ಮಳೆ ಹನಿಯ
ಬೊಗಸೆಯಲಿ ಹಿಡಿದುಕೊಳಲು..
ಗರಿಗೆದರಿ ಹಬ್ಬಿಕೊಳಲಿ ಹಕ್ಕಿ
ಇಣುಕಿರಲು ಎಳೆಬಿಸಿಲು...
ತುಂಬಿಕೊಳಲಿ ಗೋಡೆಗಳ ಮೀರಿ
ರಂಗು ರಂಗಿನ ಬೆಳಕಿನೆಸಳು...
~`ಶ್ರೀ'
ತಲಗೇರಿ
ಆಶಾದಾಯಕ ಕವನವಿದು.
ಪ್ರತ್ಯುತ್ತರಅಳಿಸಿಅಷ್ಟೂ ಸಾಲುಗಳ ಉದ್ಘೋಷ:
ತಮಸೋಮ ಜ್ಯೋತಿರ್ಗಮಯ.
ಬೆಳಕಿಗಾಗಿ ಜೀವ ಜಗತ್ತು ಹಪಹಪಿಸುತ್ತಲ್ಲವೇ ಬದರಿ ಸರ್......?? ಧನ್ಯವಾದಗಳು... :)
ಅಳಿಸಿ