"ಪುನರಾವರ್ತನ".....
ಆಗಸವು ಬಿರಿದು,ಬಣ್ಣಗಳು ಹರಿದು
ಒತ್ತಾಗಿ ಸುರಿವುದು ದ್ಯುತಿಯ ಬಾಣ..
ಶೈತ್ಯ ರಾತ್ರಿಯ ಅಮಲು ಇಳಿದು
ಕಾಡುತ್ತ ಕಳೆವುದು ಹುಲ್ಲಿನೆದೆಯ ಶ್ರಾವಣ..
ನಿಲುಕು ನೋಟಕೆ ನೆಲದ ಸಲುಗೆ
ಪರಿಮಿತಿಯ ಪಥ್ಯದಲಿ ಘಮಿಸುವಾ ಹೂವು..
ಅಲೆದು ಕಲೆಯುವ ಬಯಲ ಗಾಳಿಗೆ
ಕವಲೆಸೆದು ನಿಲ್ಲುವುದು ತಾನೊಂಟಿ ಮರವು..
ರತಿರಾಗ ಭ್ರಮೆಯ ನವಿರಾದ ಮೊರೆತ
ಹೊಂಬೆಳಕ ತುರುಬಲ್ಲಿ ರಸಿಕತೆಯ ಕದಿರು..
ಬಿಸಿಲ ಭಾಷೆಯಲಿ ಕರಗುವಾ ತುಡಿತ
ತನಿನಾದ ಸ್ಫುರಿಸುವುದು ಒರಟಾದ ಬಿದಿರು..
ಚಿಪ್ಪಿನಾ ಸೆರೆಯೊಡೆದು ಪುಟಿಯುವಾ ಚಿಗುರು
ಕಂಪನದ ತಳದೊಳಗೆ ಇಳಿಯುವುದು ಬೇರು..
ಮುಪ್ಪಿನಾ ಗೆರೆ ಬಿಡಿಸಿ ಸಂಜೆಯದು ತೃಪ್ತ
ಕಂತಲಿಹ ದಿನಮಣಿಗೆ ಆಚೆಲೋಕದ ಸೆಳೆತ..
ಹಗಲ ಹಿರಿತನ ಮುಗಿದ ಗಳಿಗೆ
ಮತ್ತೆ ಮುಗಿಲಲಿ ನಡೆದೀತು ಪ್ರತಿಫಲನ..
ಅಂತ್ಯ ಆದಿಗೆ ಯುಗದ ಬೆಸುಗೆ
ಸತ್ಯ ಮಿಥ್ಯದ ಕೂಟದ ಪುನರಾವರ್ತನ...
~`ಶ್ರೀ'
ತಲಗೇರಿ
ಆಗಸವು ಬಿರಿದು,ಬಣ್ಣಗಳು ಹರಿದು
ಒತ್ತಾಗಿ ಸುರಿವುದು ದ್ಯುತಿಯ ಬಾಣ..
ಶೈತ್ಯ ರಾತ್ರಿಯ ಅಮಲು ಇಳಿದು
ಕಾಡುತ್ತ ಕಳೆವುದು ಹುಲ್ಲಿನೆದೆಯ ಶ್ರಾವಣ..
ನಿಲುಕು ನೋಟಕೆ ನೆಲದ ಸಲುಗೆ
ಪರಿಮಿತಿಯ ಪಥ್ಯದಲಿ ಘಮಿಸುವಾ ಹೂವು..
ಅಲೆದು ಕಲೆಯುವ ಬಯಲ ಗಾಳಿಗೆ
ಕವಲೆಸೆದು ನಿಲ್ಲುವುದು ತಾನೊಂಟಿ ಮರವು..
ರತಿರಾಗ ಭ್ರಮೆಯ ನವಿರಾದ ಮೊರೆತ
ಹೊಂಬೆಳಕ ತುರುಬಲ್ಲಿ ರಸಿಕತೆಯ ಕದಿರು..
ಬಿಸಿಲ ಭಾಷೆಯಲಿ ಕರಗುವಾ ತುಡಿತ
ತನಿನಾದ ಸ್ಫುರಿಸುವುದು ಒರಟಾದ ಬಿದಿರು..
ಚಿಪ್ಪಿನಾ ಸೆರೆಯೊಡೆದು ಪುಟಿಯುವಾ ಚಿಗುರು
ಕಂಪನದ ತಳದೊಳಗೆ ಇಳಿಯುವುದು ಬೇರು..
ಮುಪ್ಪಿನಾ ಗೆರೆ ಬಿಡಿಸಿ ಸಂಜೆಯದು ತೃಪ್ತ
ಕಂತಲಿಹ ದಿನಮಣಿಗೆ ಆಚೆಲೋಕದ ಸೆಳೆತ..
ಹಗಲ ಹಿರಿತನ ಮುಗಿದ ಗಳಿಗೆ
ಮತ್ತೆ ಮುಗಿಲಲಿ ನಡೆದೀತು ಪ್ರತಿಫಲನ..
ಅಂತ್ಯ ಆದಿಗೆ ಯುಗದ ಬೆಸುಗೆ
ಸತ್ಯ ಮಿಥ್ಯದ ಕೂಟದ ಪುನರಾವರ್ತನ...
~`ಶ್ರೀ'
ತಲಗೇರಿ
'ಅಂತ್ಯ ಆದಿಗೆ ಯುಗದ ಬೆಸುಗೆ
ಪ್ರತ್ಯುತ್ತರಅಳಿಸಿಸತ್ಯ ಮಿಥ್ಯದ ಕೂಟದ ಪುನರಾವರ್ತನ'
ಸರ್ವಕಾಲಕೂ ಎಲ್ಲರೇ ಒಪ್ಪಲೇಬೇಕಾದ ನಿಜ.
ಕದಿರು - ಬಿದಿರು ಪರ್ಫೆಕ್ಟ್...
ಈ ಆತ್ಮೀಯ ಭೇಟಿ ಇರಲಿ ಪ್ರತಿ ಸಾರಿ...
ಪ್ರತ್ಯುತ್ತರಅಳಿಸಿ