ಗುರುವಾರ, ಏಪ್ರಿಲ್ 11, 2013


       ""ನನಗೆ ಸ್ವಂತ"...

ನೀ ಕೊಟ್ಟ ಕನಸ ಸಾಲು ನೆರಳ
ಮನಸಲ್ಲೇ ಸಾಕುವೆನು ಇನ್ನು ಗೆಳತಿ
ನೀನಿಟ್ಟ ಒಲವ ದಾರಿ ಕವಲ
ಸವೆಯಲು ಉಸಿರೊಂದು ಬೇಕು ಗೆಳತಿ...

ನಿನ್ನ ಕಣ್ಣ ಅಂಚಲ್ಲಿ ಆ ಹನಿಯ ತವಕ
ಒರೆಸುತ್ತ ಕೂರುವೆನು ನಾನಿರುವ ತನಕ
ಮರೆಸುತ್ತ ಸಾಗುವೆನು ನೋವ ಗೆಳತಿ
ನಿನ್ನ ಕಣ್ಣ ಮಿಂಚಲ್ಲಿ ನಾ ಬೆರೆವ ತುಡಿತ
ಹಂಚಿಹೋಗು ಕೊಂಚ ಹೃದಯ ನನಗೆ ಸ್ವಂತ!...

ನನದೆನ್ನೋ ಬಾನಲ್ಲಿ ಆ ಮುಗಿಲ ಸೆಳೆತ
ಅರಸುತ್ತ ಮಳೆಬಿಲ್ಲ ಮುಗಿಯದಾ ಮಿಡಿತ
ಒಲವಿತ್ತು ತುಂಬುವೆಯಾ ಬಣ್ಣ ಗೆಳತಿ
ಎದೆಯೆನ್ನೋ ಬದಿಯಲ್ಲಿ ನೀ ಬರಲಿ ಎನುತ
ಹಂಚಿಹೋಗು ಕೊಂಚ ಹೃದಯ ನನಗೆ ಸ್ವಂತ!..

ಬರಲಿ ಬಿಡು ಬಿಸಿಲು ಬೆಳಕಿನಂತೆ
ಅರಳು ಮೆಲ್ಲಗೆ ಎದೆಯ ಮಲ್ಲಿಗೆ
ಸೋಕುತಿರಲಿ ಸುತ್ತ ಒಲವ ಸೌರಭ
ಗೆಳತಿ ನೀನು ನನಗೆ ಸ್ವಂತ....


                              ~‘ಶ್ರೀ’
                                ತಲಗೇರಿ

1 ಕಾಮೆಂಟ್‌:

  1. ಒಳ್ಳೆಯ ಕವಿ ಪರಿಚಯ. ಮೊದಲಿಗೇ 2 ಕವನಗಳ ಅನಾವರಣ.

    "ಇಬ್ಬನಿ...ಕರಿಯ ಮುಗಿಲಿನ ಕ೦ಬನಿ..." ಕಲ್ಪನೆಯ ಅಮೋಘ...

    "ಹಂಚಿಹೋಗು ಕೊಂಚ ಹೃದಯ ನನಗೆ ಸ್ವಂತ!.." ಇದೇ ಒಲವಿನ ಕಾಗುಣಿತ ಗೆಳೆಯ.

    (ಏ‌ಎಮ್ದ ಹಾಗೆ, ಒಂದು ಪೋಸ್ಟಲ್ಲಿ, ಒಂದೇ ಕವನ ಹಾಕಿದರೇ ಓದಲೂ ಚೆನ್ನ. ಎನಂತೀರಾ ಶ್ರೀ?)

    http://www.badari-poems.blogspot.in

    ಪ್ರತ್ಯುತ್ತರಅಳಿಸಿ